ಮುಖಪುಟ

ಮುನ್ನುಡಿ

ರಾಜ್ಯ ಸರ್ಕಾರವು ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ರ ಕಲಂ–4 ರಡಿ ಹೊರಡಿಸಿದ ಅಧಿಸೂಚನೆಯ ಮೂಲಕ ರಾಜ್ಯ ನಗರ ಯೋಜನಾ ಮಂಡಳಿಯನ್ನು ರೂಪಿಸಿರುತ್ತದೆ. ಮಂಡಳಿಯು ರಾಜ್ಯದಲ್ಲಿ ದಿನಾಂಕ: 15-01-1965 ರಂದು ಜಾರಿಗೆ ಬಂದಿರುತ್ತದೆ ಮತ್ತು ಕರ್ನಾಟಕ ರಾಜ್ಯ ನಗರ ಯೋಜನಾ ಮಂಡಳಿಯ ನಿಯಮ 1964 ನ್ನು ಸದರಿ ಕಾಯ್ದೆಯ ಕಲಂ 74 ರಡಿಯಲ್ಲಿ ರೂಪಿಸಲಾಗಿರುತ್ತದೆ.

ಗುರಿ

ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದಂತೆ ಯೋಜನೆ ಮತ್ತು ಅಭಿವೃದ್ಧಿಗೆ ಸಲಹೆ ಮತ್ತು ರಾಜ್ಯದ ಸಮತೋಲಿತ ಅಭಿವೃದ್ಧಿಗೆ ತತ್ವ ಹಾಗೂ ನಿಯಮಗಳ ನಿರ್ಧಾರಿತ ವಿದೇಯಗಳಿಗೆ ಸಲಹೆ ನೀಡುವುದು.